June 28, 2017

ಮಲೆನಾಡ ಮಳೆಗಾಲ



ಧೋ ಎಂದು ಸುರಿವ ಮಳೆ
ರಸ್ತೆ ತುಂಬಿದ ನೀರು 
ತೇಲಿ ಬಿಟ್ಟಿಹ ದೋಣಿ 
ಕುಣಿದು ಸಾಗುವುದು 

ಬಚ್ಚಲಿನ ಒಲೆಯಲ್ಲಿ 
ಗೇರು ಬೀಜದ  ಘಮಲು 
ಅಡುಗೆ ಮನೆಯೊಳಗೆ
ಬಿಸಿ ಹಪ್ಪಳದ ಪರಿಮಳ 

ಅಂಗಳಕೆ ಕಾಲಿಡಲು 
ಇಂಬಳದ ಭಯವಿಹುದು  
ಕಂಬಳಿಯ ತೆಕ್ಕೆಯಲಿ 
ಮಲಗುವುದೇ ಬಲು  ಸುಖ 

ಕಿಟಕಿ ಬದಿಯಲಿ ಖುರ್ಚಿ 
ಕೈಯಲ್ಲಿ ಬಿಸಿ ಕಾಫಿ 
ಹೊರಗೆ ಸುರಿಯುವ ಮಳೆಯ 
ಜೋಗುಳದ ಹಾಡು 

ಮಲೆನಾಡ ಮಳೆಗಾಲ 
ಮನಸಲ್ಲಿ ಹಸುರಾಗಿ 
ಎಂದೆಂದೂ ಮರೆಯದಿಹ 
ಮಧುರ ನೆನಪು 

1 comment:

sunaath said...

ಮಳೆಗಾಲದ ನೈಜ ಹಾಗು ಸುಖಕರವಾದ ವಾತಾವರಣವನ್ನು ಸರಳ ಕವನದಲ್ಲಿ ಸುಂದರವಾಗಿ ಸೃಷ್ಟಿಸಿದ್ದೀರಿ. ಅಭಿನಂದನೆಗಳು.