ಆಡಲೇನೂ ಇಲ್ಲ ಆದರೂ
ಏನಾದರೂ ಹೇಳಬೇಕೆನಿಸುತ್ತದೆ
ಹುಡುಕುತ್ತಿದ್ದೇನೆ ಶಬ್ದಗಳನ್ನು
ವರುಷ ವರುಷಗಳಿಂದ
ಎದೆಯಲ್ಲೇ ಉಳಿದ ,
ಬಚ್ಚಿಟ್ಟ ಮುಚ್ಚಿಟ್ಟ ಮಾತುಗಳನ್ನು
ಬೇಕಾದಾಗ ನೆನಪಾಗದ ,
ನೆನಪಾದರೂ ಹೇಳಲಾಗದ
ನೂರಾರು ಭಾವಗಳನ್ನು
ಹಂಚಿಕೊಳ್ಳಲೇ ನಿನ್ನೊಡನೆ ?
ಅಥವಾ ಇದ್ದು ಬಿಡಲೇ ಹೀಗೆ
ಮೌನವಾಗಿಸಿ ನನ್ನ ಮಾತುಗಳನ್ನು !
3 comments:
ಮೌನ ಮುರಿದರೆ ಮತ್ತಷ್ಟು ಆಪ್ತ ಮನಗಳೂನೂ...
ಮೌನರಾಗ ಸರಾಗವಾಗಿ ಹರಿದಿದೆ!
ಮಾತು ಬೆಳ್ಳಿ, ಮೌನ ಬಂಗಾರ. ಆದ್ರೆ ಬರಬೇಕಾದ ಸಮಯದಲ್ಲಿ ಬಾರದ ಮಾತುಗಳಿಂದ ಎಷ್ಟೋ ಮನಗಳು ಭಾರ. :-)
ಚೆಂದದ ಸಾಲುಗಳು :-)
Post a Comment