November 21, 2010

ಸಣ್ಣ ಒಗಟಿಗೆ ಉತ್ತರ .....

ನಾವು ಸಣ್ಣವರಿರುವಾಗ ರಜೆ ಬಂತೆಂದರೆ ಮರುದಿನ ಅಜ್ಜನ ಮನೆ ಬಸ್ ಹತ್ತುವುದೇ ಗೊತ್ತಿದ್ದಿದ್ದು. ಅಲ್ಲಿ ಹೋದಮೇಲೆ ಇಡೀ ದಿನ , ನಮ್ಮದೇ ವಾರಿಗೆಯ ಮಕ್ಕಳೊಂದಿಗೆ ಸೇರಿಕೊಂಡು ಕುಣಿಯುವುದೊಂದೇ ಕೆಲಸ !
ಸಂಜೆ ಮನೆಗೆ ಬಂದ ತಕ್ಷಣ ಅಜ್ಜ , ಮಾವಂದಿರು ಯಾರಾದರೂ ನಮ್ಮನ್ನು ಹಿಡಿದು " ಬಾಯಿಪಾಠ" ಹೇಳಿ ಎಂದು ಕೂರಿಸುವವರೆಗೂ ನಮ್ಮದು ಆಟವೇ. ಅವರು ಎಲ್ಲರನ್ನು ಸಾಲಿನಲ್ಲಿ ಕೂರಿಸಿ , ಸರದಿಯಲ್ಲಿ ಮಗ್ಗಿ, ಶ್ಲೋಕ, ಮಾಸ, ಸಂವತ್ಸರ ಇತ್ಯಾದಿ ಎಲ್ಲವನ್ನೂ ಹೇಳಿಸುತ್ತಿದ್ದರು . ಕೆಲವೊಮ್ಮೆ ನಮಗೆ ರಾಮಾಯಣ , ಮಹಾಭಾರತದ ಕಥೆಗಳನ್ನೂ ಹೇಳುತ್ತಿದ್ದರು. ಒಮ್ಮೊಮ್ಮೆ, ನಾವು ಕಥೆಯನ್ನು ಎಷ್ಟರ ಮಟ್ಟಿಗೆ ಮನಸಿಟ್ಟು ಕೇಳಿದ್ದೇವೆ, ನೆನಪಿಟ್ಟಿದ್ದೇವೆ ಎಂದು ತಿಳಿಯಲು ಚಿಕ್ಕ ಚಿಕ್ಕ ಒಗಟು , ಪ್ರಶ್ನೆ ಕೇಳುತ್ತಿದ್ದರು. ಅಂಥಾ ಒಂದು ಒಗಟು ಮೊನ್ನೆ ಸಂದೀಪ್ ನ ಬ್ಲಾಗ್ ಓದುವಾಗ ನೆನಪಾಯಿತು . ಅದು ಹೀಗಿದೆ ,


"ಅಂಬುಧಿಯನಾಳಿರ್ದ ಗೌಡಗೆ
ಕುಂಭಕಾರನು ಜನಿಸಲಾತನ
ಶಿರವೊಂದ ಅಂಗುಲಿಯೊಳ್ ಕಡಿದನ
ಬೇಡಿ ತಪದಿಂದ

ಅಂಬ ಪಡೆದನ ಪಿತನ ಸುತನನು
ಅಂಬಿನೋಳ್ ಕೊಂದನ ವೈರಿಗೆ ಲಿಂಗವಿತ್ತಿಹ
ಶಂಭುಗೌಡನ ಸುತನ ಬಲಗೊಂಬೆ "



ಇದರಲ್ಲಿ ಯಾರು ಯಾರನ್ನು ಗುರುತಿಸುವಿರಿ   ಎನ್ನುವುದು ಪ್ರಶ್ನೆ .

ಈಗ ನಿಮ್ಮ ಉತ್ತರ ತಿಳಿಸಿ !!!!

10 comments:

sunaath said...

(೧)ವಿಷ್ಣು
(೨)ಬ್ರಹ್ಮ
(೩)ಶಿವ
(೪)ರಾವಣ
(೫)ಗಣಪತಿ

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Namma hoTTe gaNapa, avanappa shivappa ibbara gurtu sikkidange aatu!

ತೇಜಸ್ವಿನಿ ಹೆಗಡೆ said...

Ganapati
Shiva
Ravana

nange gottagiddu istE!

ಚಿತ್ರಾ said...

ಕಾಕಾ,
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು . ಆದರೆ ಲಿಸ್ಟಿಗೆ ಇನ್ನೂ ಕೆಲವರು ಸೇರಬೇಕಾಗಿದೆ ... ಇನ್ನೊಮ್ಮೆ ಓದುವಿರಾ?

ಚಿತ್ರಾ said...

ಪೂರ್ಣಿಮಾ, ತೇಜೂ,
ಎರಡು ? ಮೂರು ? ಅಷ್ಟೆಯಾ? ಹುಡುಕಿ ಹುಡುಕಿ ..... ;-)

ಸುಧೇಶ್ ಶೆಟ್ಟಿ said...

Ganapathi, Eshwara ishte gottaagiddu...

manmathanu serabeka hege?

shivu.k said...

ಚಿತ್ರ,

ನಿಮ್ಮ ಒಗಟು ನನಗೆ ಗೊತ್ತಾಗಲಿಲ್ಲ. ಉತ್ತರವನ್ನು ನೀವೇ ತಿಳಿಸಿಬಿಡಿ..

ಜಲನಯನ said...

ಸುನಾಥ್ ಸರ್ ಹೇಳಿರೋದ್ರ ಜತೆಗೆ ಮನ್ಮಥ ...ನನಗೂ ಅಷ್ಟೇ ಗೊತ್ತಾಗಿದ್ದು...ಮತ್ತೆ ..ಇನ್ನೂ ಇದೆಯಾ ಇದರ ಉತ್ತರ....? ನೀವೇ ಹೇಳಿ ಮೇಡಮ್ಮನವರೇ...

ಸಾಗರದಾಚೆಯ ಇಂಚರ said...

nandu adeya, melinavella he;lidvale uttara,
naanu mate adne enta heladu:)
neenu mastaru agta idde rashiya :)

ಜಲನಯನ said...
This comment has been removed by a blog administrator.